ಪ್ರಜಾವಾಣಿ v/s ವಿಜಯ ಕರ್ನಾಟಕ

ಇದು ನಾನು ನನ್ನ ಅಮ್ಮನ ಜೊತೆ ಸದಾ ನಡೆಯುವ ವಾಗ್ವಾದದ ವಿಷಯ !!
ನಾನು ಪ್ರಜಾವಾಣಿಯ ಕಡೆ, ನನ್ನ ಅಮ್ಮ ವಿಜಯ ಕರ್ನಾಟಕದ ಕಡೆ !!!

ನನಗೂ ಪ್ರಜಾವಾಣಿಗೂ ಅದೇನೋ ನಂಟು. ಯಾವ ತರಹದ ನಂಟು, ಸರಿಯಾಗಿ ಗೊತ್ತಿಲ್ಲ….

ಬಾಲ್ಯದಿಂದಲೂ ಪ್ರತಿದಿನ ಪ್ರಜಾವಾಣಿ ಓದುವ ಅಭ್ಯಾಸ. ಈಗಲೂ ಕೂಡ Online e-paper ಓದುತ್ತೇನೆ. ಪ್ರಜಾವಾಣಿಯ ಪುಟಗಳು, ಅದರ ಪುರವಣಿಗಳು ಅದೇನೊ ಕಣ್ಣಿಗೆ ಮುದ ನೀಡುತ್ತವೆ. ಪ್ರಜಾವಾಣಿಯ fonts, typeset ಗೆ ನಾನು ಬಹುಶಃ ಹೊಂದಿಕೊಂಡಿದ್ದೇನೆ. ‘ಸಾಪ್ತಾಹಿಕ ಪುರವಣಿ’, ‘ಮಕ್ಕಳು ಮನೋರಂಜನೆ’, ‘ಸಿನೆಮಾ ರಂಜನೆ’ ಪುರವಣಿಗಳನ್ನು ಪೂರ್ತಿಯಾಗಿ ಓದುತ್ತೇನೆ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’, ವಾಸುದೇವರ ವಿಜ್ಞಾನ ಲೇಖನಗಳನ್ನು ಕೂಡ. ಪ್ರಜಾವಾಣಿ 50 ವರ್ಷಗಳಿಂದ ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಅದು Impartial ಕೂಡ ಹೌದು ಅನ್ನೋದು ನನ್ನ ಅಭಿಪ್ರಾಯ. ಅದರ ಸುದ್ದಿಗಳಲ್ಲಿಯೂ ಏನೋ ಒಂದು ಸಮಗ್ರತೆ ಇದೆ, ಒಂದು ಘನತೆ ಇದೆ.

ಇನ್ನು ವಿಜಯ ಕರ್ನಾಟಕದ ವಿಷಯಕ್ಕೆ ಬಂದರೆ, ಮೊದಲನೆಯದಾಗಿ, ಪಕ್ಕಾ Business Minded, Partial. ಬಹುಶಃ ಅದು ತನ್ನ Circulation ಹೆಚ್ಚಿಸಿಕೊಂದಿದ್ದು ತನ್ನ ‘ರೂ 1′ ತಂತ್ರದಿಂದ. ವಿಜಯ ಕರ್ನಾಟಕ ಈಗ Times of India ಒಡೆತನಕ್ಕೆ ಸೇರಿಯಾಯ್ತು. ಇನ್ನು ಮುಂದೆ ಹೇಗೋ ಏನೋ…. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಕರ್ನಾಟಕದಲ್ಲಿ ಬರುತ್ತಿದ್ದ ಸುದ್ದಿಗಳು, ಲೇಖನಗಳನ್ನು ನೊಡಿದರೆ ತುಂಬಾ ಸಿಟ್ಟು ಬರುತ್ತದೆ. ಪತ್ರಿಕೆಯ ಪೂರ್ತಿ ‘ಕನ್ನಡ ನಾಡು’ ಪಾರ್ಟಿಯ ವಿಷಯಗಳೇ!!! ಅದನ್ನು ಯಾರು ಓದುತ್ತಿದ್ದರೋ ಗೊತ್ತಿಲ್ಲ !! ಮೊದಲನೆಯ ಪುಟದಿಂದ ಕೊನೆಯ ಪುಟದವರೆಗೂ ಕೇವಲ ‘ತೆಂಗಿನ ಕಾಯಿ’ಯ ಜಾಹೀರಾತುಗಳೆ ತುಂಬಿರುತ್ತಿದ್ದವು. ಇಷ್ಟೆಲ್ಲಾ ಮಾಡಿದ್ದರೂ ಕೊನೆಗೆ ಶ್ರೀಮಾನ್ ವಿಜಯ ಸಂಕೇಶ್ವರರೇ ಗೆಲ್ಲಲ್ಲಿಲ್ವಲ್ಲಾ!! ಛೇ !!! ಆಮೇಲೆ ವಿಜಯ ಸಂಕೇಶ್ವರರು ಜನತಾದಳ ಸೇರಿದ ಮೇಲೆ ಬರೀ ಜನತಾದಳದ್ದೇ ಸುದ್ದಿ.

ಆದರೆ ವಿಜಯ ಕರ್ನಾಟಕ ಕರ್ನಾಟಕದಲ್ಲಿ ನಂ 1 ಏಕೆ ಎಂಬುದು ನನ್ನನ್ನು ಕಾಡುತ್ತಿರುವ ಯಕ್ಷಪ್ರಶ್ನೆ !! ವಿಜಯ ಕರ್ನಾಟಕದ ಸಂಪಾದಕೀಯದಲ್ಲಿ ಪ್ರಜಾವಾಣಿಗಿಂತ ಕೆಲವು ಹೆಚ್ಚು ಲೇಖನಗಳು ಬರುತ್ತವೆ. ಆದರೆ ಕೇವಲ ಸಂಪಾದಕ್ಕೀಯಕ್ಕೋಸ್ಕರ ಜನ ವಿಜಯ ಕರ್ನಾಟಕ ಓದುತ್ತಾರ ?

ಬಹುಶಃ ಬಹಳ ವರ್ಷಗಳಿಂದ ಕನ್ನಡ ಪತ್ರಿಕೆಗಳಲ್ಲಿ ಹೆಚ್ಚು ಪ್ರಸಾರ ಹೊಂದಿದ್ದ ಪ್ರಜಾವಾಣಿ ಜನರಿಗೆ Monotonous ಆಯ್ತೇ ??

ಆದರೂ ನನಗೆ ಈಗಲೂ ಪ್ರಜಾವಾಣಿ ಎಂದರೆ ಅದೇನೋ ಪ್ರೀತಿ, ಅದೇನೋ ಗೌರವ. ಬಿಡಿಸಲಾಗದ ನಂಟು ಅನ್ನಿಸುತ್ತೆ !!!!

2 comments so far

  1. ಬಹುಶಃ ಇದೇ ಪ್ರಶ್ನೆ ಪ್ರಜಾವಾಣಿಯ ಮಾರಾಟ ನಿರ್ವಾಹಕರಿಗೂ ಹಗಲೂ, ರಾತ್ರಿ ಕಾಡುತ್ತಿರಬಹುದು. ಉತ್ತರ ಸರಳವಾಗಿಲ್ಲ. ಏಕೆಂದರೆ, ಪತ್ರಿಕೆ, ಪ್ರಕಾಶನ, ಪತ್ರಿಕೋದ್ಯಮ, ಮುದ್ರಣ ತಂತ್ರಜ್ಞಾನ ಎಲ್ಲದರಲ್ಲೂ ಅಭೂತಪೂರ್ವ ಪರಿವರ್ತನೆಗಳು ಬಂದಿವೆ. ಉದಾಹರಣೆಗೆ, ವಿಜಯ ಕರ್ನಾಟಕ ಎಲ್ಲೆಡೆ ನೆಲೆಯಾಗಲು ಕಾರಣ ಅದರ ಪ್ರಾದೇಶಿಕ ಸಂಚಿಕೆಗಳು. ಮೈಸೂರಿನ ಜನತೆಗೆ ಮೈಸೂರಿನ ಸುದ್ದಿ. ಮಂಗಳೂರಿನವರಿಗೆ ಮಂಗಳೂರಿನ ಸುದ್ದಿ.

    ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ತಂದ ಮತ್ತೊಂದು ಬದಲಾವಣೆಯೂ ಇದೆ. ಅದುವರೆವಿಗೂ ಪ್ರತಿಯೊಂದು ಪತ್ರಿಕೆಗೂ ಅದರದ್ದೇ ಆದ ಕ್ಷೇತ್ರವಿತ್ತು. ಉದಾಹರಣೆಗೆ, ಉದಯವಾಣಿ ಕರಾವಳಿಯ ಜನಪ್ರಿಯ ಪತ್ರಿಕೆ ಆಗಿತ್ತು. ಬೆಂಗಳೂರು, ಮುಂಬಯಿಯ ಕರಾವಳಿ ಕನ್ನಡಿಗರು ಆ ಊರುಗಳಲ್ಲೂ ಅವುಗಳ ಗ್ರಾಹಕರಾಗಿರುತ್ತಿದ್ದರು. ಪ್ರಜಾವಾಣಿಗೆ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಇರಲಿಲ್ಲ. ಅಲ್ಲೇನಿದ್ದರೂ ಸಂಯುಕ್ತ ಕರ್ನಾಟಕದ ರಾಜ್ಯವಿತ್ತು. ಈಗ ಕಾಲ ಬದಲಾಗಿದೆ. ಜಾಗತೀಕರಣದ ಹಾಗೆ ಕರ್ನಾಟಕೀಕರಣವೂ ಆಗುತ್ತಿದೆ. ಈ ಪತ್ರಿಕೆಗಳ ಭಾಷೆಯಲ್ಲಿಯೂ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿದ ಕಾರಣ ವಿಜಯ ಕರ್ನಾಟಕ ಹೆಚ್ಚು ಸುದ್ದಿ ಮಾಡಿದೆ ಎಂದು ಹೇಳಬಹುದು. ಎಷ್ಟಿದ್ದರೂ, ಪಕ್ಕದ ಮನೆಯ ಸುದ್ದಿ ಕೇಳುವುದರಲ್ಲಿ ಇರುವಷ್ಟು ಆಸಕ್ತಿ ಯಾವುದೋ ದೂರದ ಊರಿನ ಸುದ್ದಿಯಲ್ಲಿ ಇರುವುದಿಲ್ಲ. ಹೀಗೆ ಸುದ್ದಿಯ ಕ್ಷುದ್ರೀಕರಣ (ಅತಿ ಕ್ಷುದ್ರವಾದ ವಿಷಯವನ್ನೂ ದೊಡ್ಡ ಸುದ್ದಿಯನ್ನಾಗಿ ಪ್ರಚಾರ ಮಾಡುವ ಪ್ರವೃತ್ತಿ) ದಿಂದ ವಿಜಯಕರ್ನಾಟಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು.

    ಟೈಮ್ಸ್‌ ಆಫ್‌ ಇಂಡಿಯಾದವರ ನಿರ್ವಹಣೆಗೆ ಒಳಪಟ್ಟ ದಿ ವಿಜಯ ಟೈಂಸ್‌ನ ಮುಖಪುಟದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ ನಿಮಗೆ ನನ್ನ ಮಾತು ಅರ್ಥವಾದೀತು. ಒಟ್ಟಾರೆ ಈ ದಿನಗಳಲ್ಲಿ ಪತ್ರಿಕೋದ್ಯಮದ ಧ್ಯೇಯ ಓದುಗನಿಗೆ ಬೇಕಾದ್ದನ್ನು ನೀಡು ಎಂದಿದೆಯೇ ಹೊರತು “ತಿಳಿಸು (inform), ಅರಿವು ನೀಡು (educate) ಮತ್ತು ಸುಧಾರಿಸು (reform)” ಎನ್ನುವುದಲ್ಲ!!

  2. N R Yathish on

    prajavani is a very good paper


Leave a reply